For bulk order contact : sales@rupchik.in

Always Smiling Shankranna Glowing T-Shirt by Rupchik

Rupchik


Sale price ₹ 449.00 Regular price ₹ 599.00
Shipping calculated at checkout.
Always Smiling Shankranna Glowing T-Shirt by Rupchik by Rupchik RUPCHIK rupchik.myshopify.com
Always Smiling Shankranna Glowing T-Shirt by Rupchik by Rupchik RUPCHIK rupchik.myshopify.com
Always Smiling Shankranna Glowing T-Shirt by Rupchik by Rupchik RUPCHIK rupchik.myshopify.com
ಹೆಸರಿನಲ್ಲಿಯೇ ಒಂದು ವೇಗ, ಹೊಸ ಆಯಾಮ, ಒಂದು ಸಂಚಲನ, ಭಿನ್ನ ಹೆಜ್ಜೆ. ರಂಗಭೂಮಿ, ಚಿತ್ರರಂಗ, ಕಿರುತೆರೆ, ಇನ್ನಿತರ ಸೃಜನಶೀಲ ಪ್ರಕಾರಗಳಲ್ಲಿ ತನ್ನದೇ ಹೆಜ್ಜೆ ಮೂಡಿಸಿದ ಶಂಕರ್ ನಾಗ್, ಇಪ್ಪತ್ತು ವರುಷಗಳ ನಂತರವೂ ಪದೇ ಪದೇ ನೆನಪಾಗುತ್ತಾರೆ. ಸಮಕಾಲೀನ ಆಲೋಚನೆಗಳಿಂದಲೇ ಎಲ್ಲರಿಗೂ ಬೇಕಾದವನಾಗಿ, ಎಲ್ಲರಿಗೂ ಮಾದರಿಯಾಗಿ ಶಂಕರ್ ನಮ್ಮ ಜೊತೆ ಜೊತೆಗೆ ಬೆಳೆದು ಬರುತ್ತಿರುತ್ತಾರೆ. ಮಾಲ್ಗುಡಿ ಡೇಸ್ ನಂತಹ ಧಾರಾವಾಹಿಗಳ ನಿರ್ಮಾಣಕ್ಕಾಗಲಿ, ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಯಿರಲಿ, ಮಿಂಚಿನ ಓಟವಾಗಲಿ ಅಥವಾ ಗೀತಾದಲ್ಲಿನ ಕುಣಿತಕ್ಕಾಗಲಿ ನಮ್ಮ ಶಂಕರ್ ನಾಗ್ ನಮ್ಮ ಶಂಕರ್ ನಾಗ್ ಆಗಿಯೇ ಉಳಿಯುತ್ತಾರೆ. ಇನ್ನೆಷ್ಟೇ ಕಾಲವಾಗಲಿ, ಯಾವ ಹೊಸ ಅಲೆಯೇ ಬರಲಿ ರಸ್ತೆಯ ಆಟೋಗಳ ಮೇಲೆ, ಸ್ಟಿಕ್ಕರುಗಳಲ್ಲಿ, ಡ್ರೈವರುಗಳ ಮನಸ್ಸುಗಳಲ್ಲಿ, ಅಸಂಖ್ಯ ಅಭಿಮಾನಿಗಳ ನೆನಪುಗಳಲ್ಲಿ ಶಂಕರ್ ಬೆರೆತಿರುತ್ತಾರೆ. ಶಂಕರನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದು ಇಡೀ ಕನ್ನಡ ನಾಡೇ ಬಲ್ಲ ಸಂಗತಿ.ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ನಟ, ಅವರ ಸೇವೆ ಅತ್ಯಲ್ಪ ಸಮಯವಾದರೂ ಮರೆಯಲಾಗದ ನೆನಪು ಬಿಟ್ಟಿದ್ದಾರೆ.ಕನ್ನಡ ನಾಡು ಶಂಕರನಂತಹ ಸುಂದರ ಕನಸಿಗರಿಲ್ಲದೆ ಸೊರಗುತ್ತಿರಬಹುದೆಂಬ ಅನಿಸಿಕೆಯನ್ನು ನಿರಂತರವಾಗಿರಿಸಿದೆ. ಶಂಕರನಂತವರು ಹೆಚ್ಚು ಹೆಚ್ಚಾಗಿ ಈ ನಾಡಿನಲ್ಲುದಯಿಸಲಿ.   NO ONE HAD A BETTER VISION THAN HIM IN DIRECTING,   THE REVOLUTIONIST UNMATCHABLE!!!   Tribute to Shankarnag  by Rupchik Fashion   

Related Products