Ramandra Kannada Book By Hariprasad - Books
Rasokina

Ramandra Kannada Book by Hariprasad

Regular price ₹ 109.00 Sale price ₹ 110.00

ರಾಮಂದ್ರ 

 

ಕನ್ನಡದಲ್ಲಿ ಒಂದು ಕಾಲಕ್ಕೆ ಲಲಿತಪ್ರಭಂದಗಳ ಸುಗ್ಗಿಕಾಲವಿತ್ತು. ಈಗ ಹೊಸ ತಲೆಮಾರಿನ ಹರಿಪ್ರಸಾದ್ ಬರೆಯುತ್ತಿದ್ದಾರೆ. ಇಲ್ಲಿನ ಪ್ರಬಂಧಗಳಲ್ಲಿ ಲಲಿತಪ್ರಬಂದಕ್ಕೆ ಬೇಕಾದ ಹದವಾದ ಮನೋಭಾವ, ಭಾಷೆ ಮತ್ತು ನಿರೂಪಣಾ ಕ್ರಮ ಇವೆ. ಆದ್ದರಿಂದಲೇ ಇವನ್ನು ಓದುತ್ತ, ಜಾತ್ರೆಯಲ್ಲಿ ಕಳೆದುಹೋದ ಮಗು ಮತ್ತೆ ಸಿಕ್ಕಂತೆ ಸಂತೋಷವಾಗುತ್ತದೆ.

ಇಲ್ಲಿನ ನವಿರಾದ ವಿನೋದಪರತೆ ಎಲ್ಲೂ ಅಟ್ಟಹಾಸದ ಮಟ್ಟಕ್ಕಿಳಿಯದೆ ಹಿತವಾಗದಿದೆ. ಪ್ರಬಂಧಕ್ಕೆ ಬೇಕಾದ ಮಂದಶ್ರುತಿಯ ವಿನೋದವಿದು. ನಿರೂಪಕರು ತಮ್ಮನ್ನು ಗೇಲಿಗೊಳಿಸಿಕೊಳ್ಳದೆ ಪ್ರಬಂಧ ಹುಟ್ಟುವುದುಲ್ಲ. ಸ್ವಹತ್ಯೆಯಿಂದ ಹುಟ್ಟುವ ಈ ವಿನೋದವು ಅನೇಕ ಕೊಂಕುಬಿಂಕಗಳಲ್ಲಿ ಭಾಷೆಯನ್ನು ಬಳಸಲು ಕಾರಣವಾಗಿದೆ. ಕ್ಷೀಷೆಯಾಗಿ ಸವೆದುಹೋದ ಪದವನ್ನು ಹೊಸ ಅರ್ಥ ಚಿಮ್ಮುವಂತೆ ಬಳಸುವ ಸನ್ನಿವೇಶ ಚಾತುರ್ಯ ಇಲ್ಲಿದೆ. ಕಥನಕ್ರಮವೂ ಅನೇಕ ವಿನ್ಯಾಸಗಳಲ್ಲಿ ಪ್ರಯೋಗಗೊಂಡಿದೆ.

ಇಲ್ಲಿನ ವಿನೋದಪರತೆಯ ವಿಸ್ತರಣೆಯಾಗಿ ಮಾನವೀಯ ತುಡಿತಗಳಿವೆ. ಈ ಪ್ರಬಂಧಗಳಲ್ಲಿ ಎಷ್ಟೊಂದು ಜೀವಂತ ಮನುಷ್ಯರಿದ್ದಾರೆ? ಸಣ್ಣಸಂಗತಿಗಳಲ್ಲೂ ಗಮನಿಸುವ ಸೂಕ್ಷ್ಮನೋಟಗಳಿಂದ ಬರೆಹಕ್ಕೆ ಒಂದು ಆಪ್ತತೆ ಪ್ರಾಪ್ತವಾಗಿದೆ.

 

- ರಸೋಕಿನ ( Rasokina )

₹ 65 Standard Shipping Charges.
  • One Time Shipping Fees
  • All Over India Delivery
  • Free Shipping on order above ₹2499/-


Share this Product


More from this collection